ಕಾಡಿನ ಒಂದು ಮರದ ಮೇಲೆ ಒಂದು ಕೋಗಿಲೆ ವಾಸವಾಗಿತ್ತು . ಅದೇ ಮರದ ‘
ಮೇಲೆ ಬೇರೆ ಕೆಲವು ಪಕ್ಷಿಗಳು ವಾಸವಾಗಿದ್ದವು , ಕೋಗಿಲೆಗೆ ಖುಷಿಯಾದಾಗ ಅದು ಹಾಡುತ್ತಿತ್ತು ,
ಇದರಿಂದ ಬೇರೆ ಪಕ್ಷಿಗಳಿಗೆ ಕಿರಿಕಿರಿಯಾಗುತ್ತಿತ್ತು . ಒಂದು ದಿನ ಎಲ್ಲ ಪಕ್ಷಿಗಳು ಸೇರಿ ಅದನ್ನು ಅಲ್ಲಿಂದ ಓಡಿಸಿದವು .
ಅದು ಕಾಡಿನ ಹೊರಗೆ ಇರುವ ಒಂದು ಒಣಮರದ ಮೇಲೆ ಹೋಗಿ ಕುಳಿತುಕೊಂಡಿತು .
ಅಷ್ಟರಲ್ಲೇ ಮತ್ತೊಂದು ಕೋಗಿಲೆ ಅಲ್ಲಿಗೆ ಬಂತು. ತನ್ನ ಬಂಧುವೊಂದು ನಿರಾಶೆಯಿಂದ ಕುಳಿತಿರುವುದನ್ನು ಕಂಡು ಅದರ
ನಿರಾಶೆಗೆ ಕಾರಣ ಏನೆಂದು ಕೇಳಿತು.
ಅದಕ್ಕೆ ಮೊದಲನೆಯ ಕೋಗಿಲೆ ‘ ನಾನು ಕಾಡಿನಲ್ಲಿರುವ ಒಂದು ಮರದ ಮೇಲೆ ವಾಸಿಸುತ್ತಿದ್ದೆ . ನನಗೆ ಖುಷಿಯಾದಾಗ
ಹಾಡುತ್ತಿದ್ದೆ . ಒಂದು ದಿನ ಆ ಮರದ ಮೇಲೆ ವಾಸವಾಗಿದ್ದ ಬೇರೆ ಪಕ್ಷಿಗಳು ‘ ನೀನೇಕೆ ಹಾಡುವಿ ? ” ಎಂದು ಕೇಳಿದವು
. ಅದಕ್ಕೆ ನಾನು ನನ್ನ ಸಂತೋಷಕ್ಕಾಗಿ ಹಾಡುತ್ತೇನೆ .
ಹಾಡದೇ ನಾನು ಬದುಕಿರಲಾರೆ ಎಂದು ಹೇಳಿದೆ . ಆಗ ಎಲ್ಲ ಪಕ್ಷಿಗಳು ಸೇರಿ ನನ್ನನ್ನು ಅಲ್ಲಿಂದ ಓಡಿಸಿಬಿಟ್ಟವು ‘ ಎಂದು
ಹೇಳಿತ್ತು . ಆಗ ಎರಡನೆಯ ಕೋಗಿಲೆ ‘ ನೀನು ಅವಕ್ಕೆ ತಪ್ಪು ಉತ್ತರ ಕೊಟ್ಟಿರುವೆ .
ಅದಕ್ಕೆ ಹಾಗಾಗಿದೆ ನಿನ್ನ ಉತ್ತರದಿಂದ ಅವು ನೀನೊಬ್ಬ ಸ್ವಾರ್ಥ. ನಿನ್ನ ಮೇಲೆ ನಿನಗೆ ನಿಯತ್ರಣವಿಲ್ಲ ಎಂದು
ತಿಳಿದುಬಿಟ್ಟಿವೆ .
ನನಗೂ ಆ ಪಕ್ಷಿಗಳು ಅದೇ ಪ್ರಶ್ನೆಯನ್ನು ಕೇಳಿದ್ದವು . ಅದಕ್ಕೆ ನಾನು ‘ ನಾನು ನಿಮ್ಮನ್ನು ಖುಷಿಪಡಿಸುವದಕ್ಕಾಗಿ
ಹಾಡುತ್ತೇನೆ ‘ ಎಂದು ಹೇಳಿದ್ದೆ .
ಆದ್ದರಿಂದ ನಾನು ಈಗಲೂ ಅವುಗಳ ಜೊತೆಯಲ್ಲಿಯೇ ವಾಸಿಸುತ್ತಿದ್ದೇನೆ ಎಂದು ಹೇಳಿತು . ನಾವು ಆಡುವ ಮಾತು
ತುಂಬ ಜಾಣ್ನೆಯಿಂದ ಕೊಡಿರಬೇಕು .
ಆದ್ದರಿಂದಲೇ ‘ ಮಾತು ಬಲ್ಲವನಿಗೆ ಜಗಳವಿಲ್ಲ , ಊಟ ಬಲ್ಲವನಿಗೆ ರೋಗವಿಲ್ಲ ‘ ಎಂದು ಹಿರಿಯರು ಹೇಳಿರುವುದು .
.jpg)
ConversionConversion EmoticonEmoticon