ಈ ಎರಡು ರಾಶಿಯವರ ಜೀವನದಲ್ಲಿ ದೊಡ್ಡ ಬದಲಾವಣೆ, ಹಣ ಹುಡುಕಿ ಬರುತ್ತೆ
ಮೇಷ ರಾಶಿ
ವಿದ್ಯಾರ್ಥಿಗಳು ಕಲಿಕೆಯಲ್ಲಿ ಹೆಚ್ಚಿನ ಆಸಕ್ತಿಯನ್ನು ತೋರಿಸುತ್ತಾರೆ. ವಿದ್ಯೆಗೆ ಮೀರಿದ ಜ್ಞಾನವು ಇವರಿಗೆ ಲಭ್ಯವಾಗುತ್ತದೆ, ಆದರೆ ಕುಟುಂಬದ ಹಿರಿಯರ ಜೊತೆಯಲ್ಲಿ ಅನಾವಶ್ಯಕವಾದಂತಹ ಭಿನ್ನಾಭಿಪ್ರಾಯಗಳು ತಲೆದೋರುತ್ತವೆ. ಮುಖ್ಯವಾಗಿ ಆಡುವ ಮಾತಿನ ಮೇಲೆ ಗಮನ ನೀಡುವುದು ಬಹಳ ಮುಖ್ಯವಾಗುತ್ತದೆ. ಆರಂಭಿಸುವ ಕೆಲಸ ಕಾರ್ಯಗಳು ಕಷ್ಟ ಎನಿಸಿದರು ಮಾತಿನ ಬಲದಿಂದ ಪರಿಪೂರ್ಣಗೊಳಿಸುವಿರಿ. ಇದರಿಂದಾಗಿ ಕೆಲಸ ಕಾರ್ಯಗಳಲ್ಲಿ ಎದುರಾಗುವ ಸಮಸ್ಯೆಗಳು ಕ್ಷಣಿಕವಾಗುತ್ತವೆ.
ಈ ಅವಧಿಯಲ್ಲಿ ಹಣಕಾಸಿನ ಕೊರತೆಯು ಕಡಿಮೆಯಾಗುತ್ತದೆ. ಮಕ್ಕಳ ವಿಚಾರದಲ್ಲಿ ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳಲು ವಿಫಲರಾಗುತ್ತಾರೆ. ಇವರಲ್ಲಿನ ಹಠದ ಸ್ವಭಾವವು ಬೇರೆಯವರಿಗೆ ಬೇಸರ ಉಂಟು ಮಾಡಿದರೂ ಯಶಸ್ಸಿನ ಹಾದಿಯಲ್ಲಿ ಸಾಗಲು ಸಹಕಾರಿಯಾಗುತ್ತದೆ. ಆದರೆ ಕೋಪದ ಗುಣವೂ ಕಡಿಮೆಯಾದಷ್ಟು ಒಳ್ಳೆಯದು. ಬಾಳಸಂಗಾತಿಯ ಜೊತೆಯಲ್ಲಿ ಬೇಡದ ವಿಚಾರಗಳಿಗೆ ವಾದ ವಿವಾದವಿರುತ್ತದೆ. ಭಯ ಭಕ್ತಿಗಳಿಂದ ಕೆಲವೊಂದು ಧಾರ್ಮಿಕ ಕಾರ್ಯಗಳನ್ನು ಮಾಡುವಿರಿ. ಇರುವ ವಿಚಾರವನ್ನು ಇರುವಂತೆ ನಡೆಯುವ ನಿಷ್ಟುರತೆ ವಿರೋಧಿಗಳನ್ನು ಹೆಚ್ಚಿಸುತ್ತದೆ
ವೃಷಭ ರಾಶಿ
ನಿಮ್ಮ ಪಾಲಿಗೆ ಈ ದಿನಗಳು ಅದೃಷ್ಟದ ದಿನಗಳಾಗಲಿವೆ. ಕುಟುಂಬದಲ್ಲಿ ನಿಮ್ಮ ಮಾತಿಗೆ ಮತ್ತು ಕಾರ್ಯಯೋಜನೆಗೆ ಮನ್ನಣೆ ದೊರೆಯುತ್ತದೆ. ಸಮಾಜದಲ್ಲಿ ಎಲ್ಲರ ಪ್ರೀತಿ ವಿಶ್ವಾಸವನ್ನು ಗಳಿಸುವಿರಿ. ವಿಷ್ಣುವಿಗೆ ಸಂಬಂಧಪಟ್ಟಂತಹ ಯಾತ್ರಾ ಸ್ಥಳಕ್ಕೆ ಭೇಟಿ ನೀಡುವಿರಿ. ನಿಮ್ಮನ್ನು ಮಾತಿನಿಂದ ಗೆಲ್ಲಲು ಯಾರಿಂದಲೂ ಸಾಧ್ಯವಾಗುವುದಿಲ್ಲ. ಆಡುವ ಮಾತಿನಲ್ಲಿ ಮೋಡಿ ಮಾಡುವ ಗುಣವಿರುತ್ತದೆ. ಬೇರೆಯವರ ಮನಸ್ಸಿಗೆ ಬೇಸರ ಉಂಟಾಗುವಂತಹ ಕೆಲಸವನ್ನು ಮಾಡುವುದಿಲ್ಲ. ನಿಮಗೆ ಕುಟುಂಬದಲ್ಲಿ ಎಲ್ಲರೊಂದಿಗೆ ಹೊಂದಿಕೊಂಡು ನಡೆಯುವ ಗುಣವಿರುತ್ತದೆ.
ನವ ವಿವಾಹಿತರಿಗೆ ಸಂತಾನ ಲಾಭವಿದೆ
ಹಣಕಾಸಿನ ತೊಂದರೆಯು ಇರುವುದಿಲ್ಲ. ಹಣಸಂಪಾದಿಸುವ ಕಲೆಯು ನಿಮಗೆ ಒಲಿಯುತ್ತದೆ. ಬೇರೆಯವರಿಂದ ಹಣದ ಸಹಾಯವನ್ನು ನಿರೀಕ್ಷಿಸುವುದಿಲ್ಲ. ಆದರೆ ಬೇರೆಯವರಿಗೆ ಸಹಾಯ ಮಾಡುವಲ್ಲಿ ಮುಂಚೂಣಿಯಲ್ಲಿ ಇರುವಿರಿ. ನಿಮ್ಮ ಬಳಿ ಇರುವ ಹಣದಲ್ಲಿ ಅಲ್ಪ ಭಾಗವನ್ನು ಬೇರೆಯವರಿಗಾಗಿ ಖರ್ಚು ಮಾಡುವಿರಿ. ದಂಪತಿ ನಡುವೆ ಉತ್ತಮ ಬಾಂಧವ್ಯ ಇರುತ್ತದೆ. ನವ ವಿವಾಹಿತರಿಗೆ ಸಂತಾನ ಲಾಭವಿದೆ. ಆರೋಗ್ಯದ ಬಗ್ಗೆ ಗಮನವಿರಬೇಕು. ಶೀತದ ತೊಂದರೆ ಕಾಡಬಹುದು. ಅನಿರೀಕ್ಷಿತವಾಗಿ ಮೂಲಗಳಿಂದ ಹಣದ ಸಹಾಯ ದೊರೆಯುತ್ತದೆ. ವ್ಯಾಪಾರ ವ್ಯವಹಾರದಲ್ಲಿ ಹೆಚ್ಚಿನ ಲಾಭವಿರುತ್ತದೆ. ಹಣಕಾಸಿನ ವ್ಯವಹಾರದಲ್ಲಿ ದುಡುಕಬಾರದು.
.jpg)

ConversionConversion EmoticonEmoticon