ಶಬರಿಮಲೆಗೆ ಹೋಗುವ ಮಹಿಳೆಯರಿಗೆ ಸಿಹಿಸುದ್ದಿ
ಶಬರಿಮಲೆಗೆ ಹೋಗುವ ಮಹಿಳೆಯರಿಗೆ ಸಿಹಿಸುದ್ದಿ ಶಬರಿಮಲೆಗೆ ತೆರಳುವ ಮಹಿಳೆಯರ ಸುರಕ್ಷತೆಗೆ ಸಂಬಂಧಿಸಿದಂತೆ ಕೇರಳ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ ಹಾಗೂ ಸಿಹಿ ಸುದ್ದಿ ಒಂದನ್ನು ನೀಡಿದೆ. ಪಂಪಾ ತಟದಲ್ಲಿ ವಿಶೇಷ ವಸತಿ ವ್ಯವಸ್ಥೆ ಕಲ್ಪಿಸಿದೆ. ಇದರಲ್ಲಿ 50 ಮಹಿಳೆಯರಿಗೆ ವಿಶ್ರಾಂತಿ ಪಡೆಯಲು ವ್ಯವಸ್ಥೆ ಮಾಡಲಾಗಿದ್ದು, ನಿನ್ನೆಯಿಂದ ಆರಂಭವಾಗಿದೆ. ಅಯ್ಯಪ್ಪ ಮಾಲಾಧಾರಿಗಳೊಂದಿಗೆ ಬರುವ ಮಹಿಳೆಯರು ತಮ್ಮವರು ಬರುವವರೆಗೂ ಪಂಪಾ ಬೇಸ್/ಹಿಲ್‌ಟಾಪ್‌ನಲ್ಲಿ ನಿಲ್ಲಿಸಿದ್ದ ತಮ್ಮ ವಾಹನಗಳಲ್ಲಿ ಕಾದು ಕುಳಿತುಕೊಳ್ಳಬೇಕಿತ್ತು. ಇನ್ನು ಮುಂದೆ ಈ ಮಹಿಳೆಯರಿಗೆ ಆ ಕಷ್ಟ ಇರುವುದಿಲ್ಲ.


ConversionConversion EmoticonEmoticon