ಒಂದು ಹಗ್ ಮಾಡು ಯಾರಿಗೂ ಹೇಳಲ್ಲ ಎಂದಪೊಲೀಸ್ ಕಾನ್​ಸ್ಟೇಬಲ್

ಒಂದು ಹಗ್ ಮಾಡು ಯಾರಿಗೂ ಹೇಳಲ್ಲ ಎಂದಪೊಲೀಸ್ ಕಾನ್​ಸ್ಟೇಬಲ್ 

WebNews kannada : ‘ ಪಾಸ್ ​ಪೋರ್ಟ್ ವೆರಿಫಿಕೇಷನ್ ನೆಪದಲ್ಲಿ ಪೊಲೀಸ್ ಕಾನ್​ಸ್ಟೇಬಲ್ ಒಬ್ಬರು ಮಹಿಳಾ ಟೆಕ್ಕಿಗೆ ಒಂದೇ ಒಂದು ಹಗ್ ಮಾಡು, ಯಾರಿಗೂ ಹೇಳುವುದಿಲ್ಲ’ ಎಂದು ಕಿರುಕುಳ ನೀಡಿದ ಆರೋಪ ಬೆಂಗಳೂರಿನ ಬ್ಯಾಟರಾಯನಪುರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಇದೀಗ ಮಹಿಳಾ ಟೆಕ್ಕಿಯ ಆರೋಪದ ಬೆನ್ನಲ್ಲೇ, ಅಸಭ್ಯ ವರ್ತನೆ ತೋರಿದ ಕಾನ್​ಸ್ಟೇಬಲ್ ಕಿರಣ್ ಎಂಬಾತನನ್ನು ಅಮಾನತುಗೊಳಿಸಲಾಗಿದೆ.

ಬಾಪೂಜಿನಗರದ ಯುವತಿಯೊಬ್ಬರು ಇತ್ತೀಚಗೆ ಪಾಸ್​ಪೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ನಂತರ, ಪಾಸ್​ಪೋರ್ಟ್ ವೆರಿಫಿಕೇಷನ್​ಗೆಂದು ಪೊಲೀಸ್ ಕಾನ್​ಸ್ಟೇಬಲ್ ಕಿರಣ್  ಯುವತಿಯ ಮನೆಗೆ ಬಂದ ಪೊಲೀಸ್ ಕಾನ್​ಸ್ಟೇಬಲ್ ಕಿರಣ್, ಮನೆ ಒಳ ಪ್ರವೇಶಿಸಿ ಅರ್ಧ ಬಾಗಿಲು ಮುಚ್ಚಿದ್ದಾನೆ. ನಂತರ ಯುವತಿ ಬಳಿ, ‘‘ನಿಮ್ಮಣ್ಣ ಕ್ರಿಮಿನಲ್ ಹಿನ್ನೆಲೆ ಹೊಂದಿದ್ದಾನೆ. ಇದನ್ನೇ ನೆಪವಾಗಿಟ್ಟುಕೊಂಡು ನಿನ್ನ ಪಾಸ್​ಪೋರ್ಟ್ ಕ್ಯಾನ್ಸಲ್ ಮಾಡಿಸುತ್ತೇನೆ. ನೀನು ನನಗೆ ಸಹಕರಿಸಬೇಕು. ಬಾಗಿಲು ಹಾಕು’’ ಎಂದು ಯುವತಿ ಬಳಿ ಪೊಲೀಸ್ ಕಾನ್​ಸ್ಟೇಬಲ್ ಆಗ್ರಹಿಸಿದ್ದ ಎಂದು ದೂರಲಾಗಿದೆ. ಅಲ್ಲದೆ, ಯುವತಿ ಒಪ್ಪದಿದ್ದಾಗ ತಾನೇ ಹೋಗಿ ಬಾಗಿಲು ಮುಚ್ಚಿದ್ದಾನೆ. ಅಲ್ಲದೆ, ಯಾರಿಗೂ ಹೇಳಬೇಡ, ಒಂದೇ ಒಂದ್ ಸಲ ಹಗ್ ಮಾಡುತ್ತೇನೆ ಎಂದಿದ್ದಾಗಿ ಆರೋಪಿಸಲಾಗಿದೆ.

Previous
Next Post »