ಕೋವಿಡ್ ಎಂಆರ್‌ಎನ್‌ಎ ಲಸಿಕೆ ಪಡೆದ ಮಕ್ಕಳಿಗೆ ಹೃದಯಾಘಾತದ ಅಪಾಯ ಹೆಚ್ಚು : ಅಧ್ಯಯನದಿಂದ ಬಹಿರಂಗ


Webnewskannada

ಇತ್ತೀಚಿನ ವರ್ಷಗಳಲ್ಲಿ ಹೃದಯಾಘಾತದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚಾಗ್ತಿದೆ. ಪುರುಷರು, ಮಹಿಳೆಯರು, ವೃದ್ಧರು ಅನ್ನೋ ವ್ಯತ್ಯಾಸವಿಲ್ಲದೆ ಎಲ್ಲರೂ ಹಾರ್ಟ್‌ ಅಟ್ಯಾಕ್‌ನಿಂದ ಸಾವನ್ನಪ್ಪುತ್ತಿದ್ದಾರೆ. ಅದರಲ್ಲಿಯೂ ಹತ್ತು ವರ್ಷದೊಳಗಿನ ಮಕ್ಕಳನ್ನು ಸಹ ಹಾರ್ಟ್‌ ಅಟ್ಯಾಕ್ ಕಾಡುತ್ತಿದೆ. ಇದೀಗ ಕೋವಿಡ್ ಎಂಆರ್‌ಎನ್‌ಎ ಲಸಿಕೆ ಪಡೆದ ಮಕ್ಕಳಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ ಎಂದು ಬಾಂಬ್ ಶೆಲ್ ಅಧ್ಯಯನವು ದೃಢವಾಗಿ ತಿಳಿಸಿದೆ.ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದ ಪ್ರೊಫೆಸರ್ ಕಾಲ್ನಡಿ ಆಂಡ್ಯೂಸ್ ನೇತೃತ್ವದ ಯುಕೆ ಪ್ರಮುಖ ವೈದ್ಯಕೀಯ ತಜ್ಞರು, ಸಾಂಕ್ರಾಮಿಕ ರೋಗಶಾಸ್ತ್ರಜ್ಞರು, ಜೈವಿಕ ಸಂಖ್ಯಾಶಾಸ್ತ್ರಜ್ಞರು ಮತ್ತು ಸಾರ್ವಜನಿಕ ಆರೋಗ್ಯ ತಜ್ಞರ ತಂಡವು ಈ ಅಧ್ಯಯನವನ್ನು ನಡೆಸಿದೆ. ಈ ಅಧ್ಯಯನಕ್ಕೆ 5 ರಿಂದ 15 ವಯಸ್ಸಿನ 1.7 ಮಿಲಿಯನ್ ಮಕ್ಕಳನ್ನು ಒಳಪಡಿಸಲಾಗಿದೆ. ಸಂಶೋಧನಾ ತಂಡವು ಮಕ್ಕಳನ್ನು ಕೋವಿಡ್ “ಲಸಿಕೆಗಳನ್ನು ಪಡೆದವರು ಹಾಗೂ ಪಡೆಯದವರು ಎಂದು ಎರಡು ಗುಂಪುಗಳಾಗಿ ವಿಂಗಡಿಸಿ ಅಧ್ಯಯನ ನಡೆಸಿದೆ. ಈ ಅಧ್ಯಯನ ವೇಳೆ ಲಸಿಕೆ ಹಾಕದ ಒಂದೇ ಒಂದು ಮಗುವೂ ಹೃದಯ ಸಂಬಂಧಿ ಸಮಸ್ಯೆಗಳಿಂದ ಬಳಲುತ್ತಿಲ್ಲ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ.

Previous
Next Post »