ಹೃದಯಾಘಾತ: 5 ಪದಕ ಗೆದ್ದ ಪೃಥ್ವಿ ಇನ್ನಿಲ್ಲ ಅಪರಾಧ ಪತ್ತೆ ಕಾರ್ಯಾಚರಣೆಯಲ್ಲಿ ಪೊಲೀಸ್‌ ಇಲಾಖೆಯೊಂದಿಗೆ 9 ವರ್ಷ ಸೇವೆ ಸಲ್ಲಿಸಿದ್ದ ಗಂಡು ಶ್ವಾನ ಪೃಥ್ವಿ ಹೃದಯಾಘಾತದಿಂದ ಸಾವನ್ನಪ್ಪಿದೆ. ತನ್ನ ಕರ್ತವ್ಯನಿಷ್ಠೆಗೆ ಒಟ್ಟು 5 ಪದಕ ಪಡೆದಿದ್ದ ಪೃಥ್ವಿ, ಶ್ವಾನದಳ ಸಿಬ್ಬಂದಿ ಶಿವ MR

ಗರಡಿಯಲ್ಲಿ ಪಳಗಿತ್ತು. ಪೃಥ್ವಿ ಅಗಲಿಕೆಗೆ ಪೊಲೀಸ್‌ ಸಿಬ್ಬಂದಿ ಕಂಬನಿ ಮಿಡಿದಿದ್ದು, ಮಡಿಕೇರಿ ಡಿಆರ್ ಪೊಲೀಸ್‌ ಆವರಣದಲ್ಲಿ ಸಕಲ ಗೌರವದೊಂದಿಗೆ ಅಂತ್ಯಕ್ರಿಯೆ ಮಾಡಲಾಗಿದೆ. ಕೊಡಗಿನ ಅಪರಾಧ ಪ್ರಕರಣದಲ್ಲಿ ಪೃಥ್ವಿ ಮಿಂಚಿನ ಕಾರ್ಯಾಚರಣೆ ನಡೆಸಿತ್ತು.