ಗೆಲುವು ನಮ್ಮದೇ ಎಂದ ಪ್ರಧಾನಿ.. ಪಾಪಿ ಪಾಕ್‌ನಲ್ಲಿ ಸಂಭ್ರಮಾಚರಣೆ ಭಾರತದೊಂದಿಗಿನ ಯುದ್ಧದಲ್ಲಿ ಪ್ರಧಾನಿ ಶೆಹಬಾಜ್ ವಿಜಯ ಘೋಷಿಸಿದ ನಂತರ ಪಾಕ್ ಜನ ಸಂಭ್ರಮಿಸುತ್ತಿದ್ದಾರೆ. ಅವರು ತಮ್ಮ ರಾಷ್ಟ್ರಧ್ವಜ ಹಿಡಿದು ರಸ್ತೆಗಳಲ್ಲಿ ಪ್ಯಾಲಿ ನಡೆಸಿದರು. ಪೇಶಾವರದಲ್ಲಿ ನಡೆದ ಸೆಲೆಬ್ರೇಷನ್ ವಿಡಿಯೋವನ್ನು PAKನ ಡಿಜಿಟಲ್ ಮೀಡಿಯಾ ಚಾನೆಲ್‌ವೊಂದು Xನಲ್ಲಿ

ಹಂಚಿಕೊಂಡಿದೆ. ಭಾರತದೊಂದಿಗೆ ಕಾಲುಕೆರೆದು ಜಗಳಕ್ಕೆ ಬಂದು ನಂತರ ನಾವೇ ಗೆದ್ದೆವು ಎಂದು ಘೋಷಿಸಿಕೊಳ್ಳಲು ನಿಮಗೆ ನಾಚಿಕೆಯಾಗುವುದಿಲ್ಲವೇ ಎಂದು ಭಾರತದ ಜನರು ಪಾಕ್ ವಿರುದ್ಧ ಕೆಂಡ ಕಾರುತ್ತಿದ್ದಾರೆ.