ಕ್ಯಾನ್ಸ‌ರ್ ರೋಗಿಗಳಿಗೆ ಆರೋಗ್ಯ ಇಲಾಖೆ ಒಳ್ಳೆಯ ಸುದ್ದಿ ನೀಡಿದೆ. ರಾಜ್ಯದ 16 ಜಿಲ್ಲಾ ಆಸ್ಪತ್ರೆಗಳಲ್ಲಿ ಆರೋಗ್ಯ ಇಲಾಖೆ ಕೀಮೋಥೆರಪಿ ಕೇಂದ್ರ ಆರಂಭಿಸುತ್ತಿದೆ. ವಿಜಯಪುರ, ಉಡುಪಿ, ಬಳ್ಳಾರಿ, ಧಾರವಾಡ, ಚಿತ್ರದುರ್ಗ, ವಿಜಯನಗರ, ಹಾವೇರಿ, ಬೆಂಗಳೂರು

ಗ್ರಾಮೀಣ, ರಾಮನಗರ, ಬೆಂಗಳೂರು ನಗರ, ದಕ್ಷಿಣ ಕನ್ನಡ, ಮೈಸೂರು, ದಾವಣಗೆರೆ, ತುಮಕೂರು, ಕೋಲಾರ, ಬಾಗಲಕೋಟೆಯಲ್ಲಿ ಇಂದಿನಿಂದ ಆರಂಭವಾಗಲಿವೆ. ಜೊತೆಗೆ ಮೆಡಿಕಲ್‌ ಆಂಕಾಲಜಿಸ್ಟ್‌ಗಳ ಸೇವೆ, ವೈದ್ಯರು & ಇತರ ಸಿಬ್ಬಂದಿಯ ಸೌಲಭ್ಯವಿರುತ್ತದೆ.