ಚೈತ್ರಾ ಕುಂದಾಪುರ ಮದುವೆಗೆ ತಂದೆಯಿಂದಲೇ ಆಕ್ಷೇಪ.. ಸ್ಫೋಟಕ ಆರೋಪ ಬಿಗ್ ಬಾಸ್ ಖ್ಯಾತಿಯ ಚೈತ್ರಾ ಕುಂದಾಪುರ ಬಹುಕಾಲದ ಗೆಳೆಯ ಶ್ರೀಕಾಂತ್ ಜೊತೆ ಮೇ 9ರಂದು ಮದುವೆಯಾಗಿರುವುದು ಗೊತ್ತೇ ಇದೆ. ಆದರೆ ಚೈತ್ರಾ ವಿರುದ್ಧ ತಂದೆ ಬಾಲಕೃಷ್ಣ ನಾಯ್ಕ ಹಲವು ಸ್ಫೋಟಕ ಆರೋಪ ಮಾಡಿದ್ದಾರೆ. 'ಈ ಮದುವೆಯನ್ನು ನಾನು

ಒಪ್ಪುವುದಿಲ್ಲ. ನನ್ನನ್ನು ಮದುವೆಗೂ ಕರೆದಿಲ್ಲ. ಚೈತ್ರಾ ಮತ್ತು ಆಕೆಯ ಪತಿ ಇಬ್ಬರೂ ಕಳ್ಳರು. ನನ್ನ ಪತ್ನಿ ಕೂಡ ಚೈತ್ರಾಳ ಬೆಂಬಲಕ್ಕೆ ನಿಂತಿದ್ದಾಳೆ. ಇವರೆಲ್ಲ ಹಣದ ಆಸೆಗಾಗಿ ಹೀಗೆ ಮಾಡುತ್ತಿದ್ದಾರೆ' ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ