ಗಂಡ ಹೆಂಡ್ತಿ ಜಗಳಕ್ಕೆ ಬಲಿಯಾದ ಮಕ್ಕಳು

ಗಂಡ ಹೆಂಡ್ತಿ ಜಗಳಕ್ಕೆ ಬಲಿಯಾದ ಮಕ್ಕಳು


ಬೆಂಗಳೂರು, (ನವೆಂಬರ್ 22): ಏನು ಅರಿಯದ ಈ ಮುದ್ದು ಮಕ್ಕಳು ತನ್ನ ತಾಯಿ ಕೈನಿಂದಲೇ ಕೊಲೆಯಾಗಿದ್ದಾರೆ ಎನ್ನುವುದನ್ನ ನಂಬಲಸಾಧ್ಯವಾದರು ನಂಬಲೇಬೇಕು..ಮಕ್ಕಳ ಬದುಕು ರೂಪಿಸಬೇಕಾದ ಹೆತ್ತಮ್ಮನೇ ಮಕ್ಕಳ ಜೀವನವನ್ನೇ ಮುಗಿಸಿಬಿಟ್ಟಿದ್ದಾಳೆ. ಹೌದು… ಮಹಿಳೆಯೊಬ್ಬರು ತನ್ನಿಬ್ಬರು ಮುದ್ದಾದ ಮಕ್ಕಳನ್ನು ಕೈಯಾರೆ ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರಿನ ಸುಬ್ರಮಣ್ಯಪುರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಹಗ್ಗದಿಂದ ಕುತ್ತಿಗೆಗೆ ಬಿಗಿದು ಶಂಭು(7), ಶಿಯಾ ಳನ್ನ (3) ಕೊಲೆ ಮಾಡಿದ್ದಾಳೆ. ಬಳಿಕ ತಾನು ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಆದ್ರೆ, ಸರಿಯಾದ ಸಮಯಕ್ಕೆ ಗಂಡ ಬಂದು ಕಾಪಾಡಿದ್ದಾನೆ.ಜಾರ್ಖಾಂಡ್ ಮೂಲದ ಸುನಿಲ್ ಸಾಹು ಹಾಗೂ ಮಮತಾ ಸಾಹು ದಂಪತಿ ಬೆಂಗಳೂರಿನ ಸುಬ್ರಹ್ಮಣ್ಯಪುರದಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸಮಾಡಿಕೊಂಡಿದ್ದರು. ಸುನಿಲ್ ಸಾಹು ಆಟೋ ಓಡಿಸಿಕೊಂಡಿದ್ರೆ ಮಮತಾ ಗೃಹಿಣಿಯಾಗಿದ್ದಳು. ಹೀಗಿರಬೇಕಾದ್ರೆ ಪತ್ನಿಗೆ ಪತಿ ಮೇಲೆ ಅನುಮಾನ. ಜಾರ್ಖಾಂಡ್ ಮೂಲದ ಮಹಿಳೆ ಜೊತೆಗೆ ಫೋನಲ್ಲಿ ಮಾತಾಡ್ತಾನೆ ಅನ್ನೋ ಸಂಶಯ ಇತ್ತು..ಇದೇ ಕಾರಣಕ್ಕೆ ಇಬ್ಬರ ಮಧ್ಯೆ ಆಗಾಗ ಗಲಾಟೆ ನಡೀತಿತ್ತು..ಅದರಂತೆ ನವಂಬರ್ 21 ರ ಸಂಜೆ ಕೂಡ ಗಲಾಟೆ ಆಗಿದೆ…ಗಲಾಟೆ ಬಳಿಕ ಸಂಜೆ 7.30 ಕ್ಕೆ ಸರಿಯಾಗಿ ಗಂಡ ಸುನಿಲ್ ಸಾಹು ಆಟೋ ತೆಗೆದುಕೊಂಡು ಕೆಲಸಕ್ಕೆ ಹೋಗಿದ್ದಾನೆ‌. ಹೀಗೆ ಹೋದವನಿಗೆ 9.45 ರ ಸುಮಾರಿಗೆ ಬಂದಗ ಸುನೀಲ್ ಗೆ ಕಂಡಿದ್ದು ಮಾತ್ರ ಭಯಾನಕ. ಇಬ್ಬರು ಮಕ್ಕಳು ಕುತ್ತಿಗೆ ಬಿಗಿದು ಕೊಲೆ ಮಾಡಿದ ಸ್ಥತಿಯಲ್ಲಿದ್ರೆ ಪತ್ನಿ ಕತ್ತು ಸೀಳಿತ್ತು..ಹಿಂದೂ ಮುಂದು ನೋಡದೆ ಪತ್ನಿಯನ್ನ ಮೊದಲು ಆಸ್ಪತ್ರೆಗೆ ಶಿಫ್ಟ್ ಮಾಡಿದ್ದಾನೆ. ಬಳಿಕ ಏನಾಯ್ತು ಅಂತಾ ತಿಳಿತಿದ್ದಂತೆ ಬೆಚ್ಚಿಬಿದ್ದಿದ್ದ. ಯಾಕಂದ್ರೆ ಗಂಡನ ಮೇಲಿನ ಕೋಪಕ್ಕೆ ಪತ್ನಿಯೇ ಇಬ್ಬರು ಮಕ್ಕಳನ್ನ ಸೆಣಬಿನ ದಾರದಿಂದ ಕತ್ತು ಬಿಗಿದು ಕೊಲೆ ಮಾಡಿ ನಂತರ ತಾನು ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಆದ್ರೆ ದಾರ ತುಂಡಾಗಿ ಕೆಳಗೆ ಬಿದ್ದಿದ್ದಾಳೆ…ಬಳಿಕ ಮನೆಯಲ್ಲಿದ್ದ ಚಾಕುವಿನಿಂದ ಕತ್ತು ಕೊಯ್ದುಕೊಂಡಿದ್ದಾಳೆ..ಆದ್ರೆ ಪ್ರಾಣ ಹೋಗಿರಲಿಲ್ಲ. ಸದ್ಯ ಮಮತಾ ಸಾಹು ಆಸ್ಪತ್ರೆಗೆ ದಾಖಲಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಪ್ರಕರಣ ದಾಖಲಿಸಿಕೊಂಡಿರುವ ಸುಬ್ರಹ್ಮಣ್ಯಪುರ ಪೊಲೀಸರು ತನಿಖೆ ನಡೆಸ್ತಿದ್ದಾರೆ.

Previous
Next Post »