ಬ್ರಹ್ಮಾವರ ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಮಹಿಳಾ ಆರೋಗ್ಯ ಮತ್ತು ನೈರ್ಮಲ್ಯ ಜಾಗೃತಿ ಕಾರ್ಯಕ್ರಮ

ಬ್ರಹ್ಮಾವರ ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಮಹಿಳಾ ಆರೋಗ್ಯ ಮತ್ತು ನೈರ್ಮಲ್ಯ ಜಾಗೃತಿ  ಕಾರ್ಯಕ್ರಮ-webnewskannada



ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆ ಬ್ರಹ್ಮಾವರ ಇಲ್ಲಿನ ಮಹಿಳಾ ಕುಂದು ಕೊರತೆ ಪರಿಹಾರ ಸಮಿತಿಯಿಂದ  ಕಾರ್ಯಕ್ರಮ ಜರುಗಿತು. ಸಂಪನ್ಮೂಲ ವ್ಯಕ್ತಿಯಾಗಿ  ಆಗಮಿಸಿದ ಡಾ. ದೀಕ್ಷಿತಾ   ಸ್ತ್ರೀ ರೋಗ ತಜ್ಞರು ಬ್ರಹ್ಮಾವರ ಸಮುದಾಯ ಆರೋಗ್ಯ ಕೇಂದ್ರ ಇವರು  ವಿದ್ಯಾರ್ಥಿನಿಯನಿಯರಿಗೆ ಕಲಿಕೆಯ ಜೊತೆಗೆ  ಅವರ ವೈಯಕ್ತಿಕ ಆರೋಗ್ಯ , ವೈಯಕ್ತಿಕ ಕಾಳಜಿ, ಸ್ವಚ್ಛತೆ ಮುಖ್ಯ ಈ  ಕುರಿತು ಮಾಹಿತಿ ಹಾಗೂ ವಿವಿಧ ಪರಿಹಾರ ನೀಡಿದರು. . ಸಂಸ್ಥಾಪಕರಾದ  ಸುಬ್ರಮಣ್ಯ , ಕಾಲೇಜಿನ ನಿರ್ದೇಶಕಿಯಾದ ಶ್ರೀಮತಿ ಮಮತಾ  ಉಪಪ್ರಾಂಶುಪಾಲರಾದ ಶ್ರೀಮತಿ ಸುಜಾತ ಹಾಗೂ ಮಹಿಳಾ ಕುಂದು ಕೊರತೆ ಪರಿಹಾರ   ಸಮಿತಿಯ ಸಂಚಾಲಕಿ ಶ್ರೀಮತಿ ರಾಝಿಕಾ , ಎಲ್ಲಾ ಉಪನ್ಯಾಸಕರು ,
 ಉಪನ್ಯಾಸಕೇತರರು  ಎಲ್ಲಾ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು  ಉಪನ್ಯಾಸಕಿ ಅನುಪಮ ಭಟ್  ನಿರೂಪಿಸಿದರೆ,  ವಿದ್ಯಾರ್ಥಿನಿ  ಅನೂಷ ಸ್ವಾಗತಿಸಿ, ವಿದ್ಯಾರ್ಥಿನಿ ಐಶ್ವರ್ಯ ವಂದಿಸಿದರು.
Previous
Next Post »