ಪುಷ್ಪ-2 ರಿಲೀಸ್ ವೇಳೆ ಹುಚ್ಚಾಟ.. ಬೆಂಕಿ ಹಚ್ಚಿ ಕುಣಿದಾಡಿದ ಫ್ಯಾನ್ಸ್!
ಪುಷ್ಪ-2 ರಿಲೀಸ್ ವೇಳೆ ಹುಚ್ಚಾಟ.. ಬೆಂಕಿ ಹಚ್ಚಿ ಕುಣಿದಾಡಿದ ಫ್ಯಾನ್ಸ್! ಪುಷ್ಪ ಸಿನಿಮಾ ದೇಶಾದ್ಯಂತ ದೊಡ್ಡ ಹೈಪ್ ಕ್ರಿಯೇಟ್ ಮಾಡಿದೆ. ಹೈದರಾಬಾದ್‌ನಲ್ಲಿ ಕಾಲ್ತುಳಿತದಲ್ಲಿ ಮಹಿಳೆಯೊಬ್ಬರು ಉಸಿರು ಚೆಲ್ಲಿದ್ದರೆ, ಇತ್ತ ಬೆಂಗಳೂರಿನಲ್ಲಿ ಕೆಲವು ಕಡೆ ಅಭಿಮಾನಿಗಳಿಂದ ತೊಂದರೆ ಸಹ ಆಗುತ್ತಿದೆ. ಊರ್ವಶಿ ಚಿತ್ರಮಂದಿರದಲ್ಲಿ ಪುಷ್ಪ ಚಿತ್ರದ ಹಾಡು ಬರುತ್ತಿದ್ದಂತೆ ಸ್ಟೀನ್ ಮುಂದೆ ಬೆಂಕಿ ಹಚ್ಚಿ ಕುಣಿದಾಡಿ ಹುಚ್ಚು ಅಭಿಮಾನ ಮೆರೆದಿದ್ದಾರೆ. ಈ ವೇಳೆ ಥಿಯೇಟರ್ ಸಿಬ್ಬಂದಿ-ಫ್ಯಾನ್ಸ್ ಮಧ್ಯೆ ವಾಗ್ವಾದ ನಡೆದಿದ್ದು, ಪೊಲೀಸರು ಬಂದು ಪರಿಸ್ಥಿತಿ ತಿಳಿಗೊಳಿಸಿದ್ದಾರೆ.


ConversionConversion EmoticonEmoticon