ಕಾಳಿ ದೇವಿ ಪ್ರತ್ಯಕ್ಷವಾಗಲಿಲ್ಲ.. ಕತ್ತು ಸೀಳಿಕೊಂಡ ಅರ್ಚಕ!

ಕಾಳಿ ದೇವಿ ಪ್ರತ್ಯಕ್ಷವಾಗಲಿಲ್ಲ.. ಕತ್ತು ಸೀಳಿಕೊಂಡ ಅರ್ಚಕ! 

ಕಾಳಿ ದೇವಿ ಪ್ರತ್ಯಕ್ಷವಾಗಲಿಲ್ಲ.. ಕತ್ತು ಸೀಳಿಕೊಂಡ ಅರ್ಚಕ! ವಾರಾಣಸಿಯ ಅರ್ಚಕರೊಬ್ಬರು ಕಾಳಿ ದೇವಿ ಪ್ರತ್ಯಕ್ಷವಾಗಲಿಲ್ಲ ಎನ್ನುವ ಬೇಸರಕ್ಕೆ ಕತ್ತು ಸೀಳಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅರ್ಚಕ ಅಮಿತ್ ಶರ್ಮಾ ಎಂಬುವವರು ಮನೆಯ ರೂಮಿನ ಬಾಗಿಲು ಹಾಕಿಕೊಂಡು ಸತತ 24 ಗಂಟೆಗಳ ಕಾಲ ಕಾಳಿ ದೇವಿಯನ್ನು ನಿಷ್ಠೆಯಿಂದ ಪೂಜಿಸಿದ್ದರು. ಆದರೆ, ಆ ತಾಯಿ ದರ್ಶನ ಕೊಡಲಿಲ್ಲ ಎನ್ನುವ ಬೇಸರದಲ್ಲಿ ಕತ್ತು ಸೀಳಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಅಡುಗೆ ಮಾಡುತ್ತಿದ್ದ ಪತ್ನಿಗೆ ತಾಯಿ ಕಾಳಿ ನೀನೇ ದಾರಿ ತೋರಿಸು ಎಂದು ಜೋರಾಗಿ ಕೂಗಿದ್ದರು ಎನ್ನಲಾಗಿದೆ.






Previous
Next Post »