ಬಾರಕೂರು ಬೆಣ್ಣೆಕುದ್ರು ಶ್ರೀ ಕುಲಮಹಾಸ್ತ್ರೀ ಅಮ್ಮನವರ ದೇವಸ್ಥಾನದಲ್ಲಿ ಡಿ.15 ಧನು ಸಂಕ್ರಮಣದಿಂದ ಡಿ.19ರ ಗುರುವಾರದವರೆಗೆ ವಾರ್ಷಿಕ ಜಾತ್ರಾ ಮಹೋತ್ಸವ ಕಾರ್ಯಕ್ರಮ
ಬಾರಕೂರು ಬೆಣ್ಣೆಕುದ್ರು ಶ್ರೀ ಕುಲಮಹಾಸ್ತ್ರೀ ಅಮ್ಮನವರ ದೇವಸ್ಥಾನದಲ್ಲಿ ಡಿ.೧೫ ಧನು ಸಂಕ್ರಮಣದಿಂದ ಡಿ.೧೯ರ ಗುರುವಾರದವರೆಗೆ ವಾರ್ಷಿಕ ಜಾತ್ರಾ ಮಹೋತ್ಸವ ಕಾರ್ಯಕ್ರಮ ಜರುಗಲಿದೆ.
ಧಾರ್ಮಿಕ ಕಾರ್ಯಕ್ರಮಗಳು : ಡಿ.15ರಂದು ಬೆಳಿಗ್ಗೆ ಪ್ರಾರ್ಥನೆ, ಪುಣ್ಯಾಹ ದೇವನಾಂದಿ, ಅಗ್ನಿ ಜನನ, 108 ಕಾಯಿ ಗಣಹೋಮ, ನವಕ ಪ್ರಧಾನ ಕಲಶಾಭಿಷೇಕ, ಮಧ್ಯಾಹ್ನ ಗಂಟೆ 12.00ಕ್ಕೆ ಪೂರ್ಣಾಹುತಿ, ಅಪರಾಹ್ನ ಗಂಟೆ 3.00 ರಿಂದ ಶ್ರೀ ಕುಲಮಹಾಸ್ತ್ರೀ ಮಹಿಳಾ ಭಜನಾ ಮಂಡಳಿ ಇವರಿಂದ ಭಜನೆ ಹಾಗೂ ರಾತ್ರಿ ಗಂಟೆ ೧೨:೦೦ ರಿಂದ ಶ್ರೀ ವಿನಾಯಕ ಭಜನಾ ಮಂಡಳಿ, ನಾಗರಮಠ ಹಾಗೂ ಸ್ಥಳೀಯ ಭಜನಾ ಮಂಡಳಿಯಿಂದ ಕುಣಿತ ಭಜನೆ ನಡೆಯಲಿದೆ. ರಾತ್ರಿ ಗಂಟೆ 7.00ಕ್ಕೆ ಗುರುಮಠದ ಮೂಲ ಮನೆಯಲ್ಲಿ ತುಳಸಿ ಪೂಜೆ, ರಾತ್ರಿ ಗಂಟೆ ೧೦:೦೦ಕ್ಕೆ ಕೆಂಡಸೇವೆ 11.30ಕ್ಕೆ ರಂಗಪೂಜೆ. ತುಳಸಿ ಪೂಜೆ ನಡೆಯಲಿದೆ. ಡಿ.16ರಂದು ಪೂರ್ವಾಹ್ನ 9:00ಕ್ಕೆ ಮಹಾಮಂಗಳಾರತಿ 10.00ಕ್ಕೆ ಪರಿವಾರ ದೇವರುಗಳ ನೃತ್ಯಸೇವೆ. 12.00ಕ್ಕೆ ತುಲಾಭಾರಾದಿ ಹರಕೆಗಳು, ಮಧ್ಯಾಹ್ನ ಮಹಾ ಅನ್ನಸಂತರ್ಪಣೆ, ಅಪರಾಹ್ನ ಗಂಟೆ 3.00ಕ್ಕೆ ಮಹಾಮಂಗಳಾರತಿ, ಮಹಾಬಲಿ ಪೂಜೆ, ಸಂಜೆ ಗಂಟೆ 5.00ಕ್ಕೆ ಸೆಡಿ ಪೂಜೆ, ಬೆಳಗಿನ ಜಾವ ಗಂಟೆ 5.00ಕ್ಕೆ ತೆಪ್ಪೋತ್ಸವ (ಹೊಳೆಯಾನ) ಕಟ್ಟೆಪೂಜೆ ನಡೆಯಲಿದೆ. ಡಿ.17ರಂದು ಪೂರ್ವಾಹ್ನ 9.00ಕ್ಕೆ ಮಹಾಮಂಗಳಾರತಿ 10.00ಕ್ಕೆ ಪರಿವಾರ ದೇವರುಗಳ ನೃತ್ಯಸೇವೆ. ಗುರು ಪೀಠದಲ್ಲಿ ದೀಪಾರಾಧನೆ. 12.00ಕ್ಕೆ ತುಲಾಭಾರಾದಿ ಹರಕೆಗಳು, ಅಪರಾಹ್ನ ಗಂಟೆ 3.00 ರಿಂದ ಮುಳ್ಳುಹಾವಿಗೆ ಪಾದುಕೆ ಪೂಜೆ, ಬೆನಗಲ್ಲು ಪೂಜೆ. ಯೋಗಿ ಪುರುಷರ ದರ್ಶನ, ಬೊಬ್ಬರ್ಯ ದೇವರ ದರ್ಶನ, ಅಜ್ಜಮ್ಮ ದೇವರಿಗೆ ಹೂವು ಅರ್ಪಣೆ ನಡೆಯಲಿದೆ. ಡಿ.18ರಂದು ಪೂರ್ವಾಹ್ನ ಗಂಟೆ 11.00ಕ್ಕೆ ಶ್ರೀ ನಾಗದೇವರ ದರ್ಶನ, ಗಂಟೆ 12.00ಕ್ಕೆ ಮಹಾಪೂಜೆ ಹಸಲ ದೈವ ಮತ್ತು ಕೋಳಿಯಾರ ದೈವದ ಪೂಜೆ ರಾತ್ರಿ ಗಂಟೆ 9.00ಕ್ಕೆ ಶ್ರೀ ಮಲೆಸಾವಿರ ಮತ್ತು ಪರಿವಾರ ದೈವಗಳ ಕೋಲ ನಡೆಯಲಿದೆ. ಡಿ.19ರಂದು ಪ್ರಾತಃಕಾಲ ಗಂಟೆ 6.00ಕ್ಕೆ ಮಲೆಸಾವಿರ ದೈವ ದರ್ಶನ, ಗಂಟೆ ೮:೦೦ಕ್ಕೆ ಹಾಲಾವಳಿ ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮ : ಡಿ.17 ಸೋಮವಾರ ಸಂಜೆ 6.30ರಿ0ದ ಮೊಗವೀರ ಯುವಕ ಸಂಘದಿಂದ ಸಾಂಸ್ಕೃತಿಕ ವೈವಿಧ್ಯ ಕಾರ್ಯಕ್ರಮ ಹಾಗೂ ಡಿ.17ರಂದು ಮೊಗವೀರ ಮಹಿಳಾ ಸಂಘದಿಂದ ಸಾಂಸ್ಕೃತಿಕ ವೈವಿದ್ಯ ಕಾರ್ಯಕ್ರಮ ನಡೆಯಲಿದೆ. ಹೊರೆ ಕಾಣಿಕೆ : ಹೊರೆ ಕಾಣಿಕೆ ವಾಹನಗಳು ಡಿ.15ರಂದು ಮಧ್ಯಾಹ್ನ ಗಂಟೆ 3.00ಕ್ಕೆ ಬಾರಕೂರು ಕಲ್ಚಪ್ರದಲ್ಲಿ ಒಟ್ಟು ಸೇರುವಂತೆ ಸೂಚಿಸಲಾಗಿದೆ. ನಿತ್ಯ ಅನ್ನ ದಾಸೋಹ : ಕ್ಷೇತ್ರದ ನಿತ್ಯ ಅನ್ನ ದಾಸೋಹಕ್ಕೆ ರೂ.99,999 ನೀಡಿದಲ್ಲಿ ಶಾಶ್ವತವಾಗಿ ವರ್ಷದಲ್ಲಿ ಒಂದು ದಿನ ದೇಣಿಗೆ ನೀಡಿದ ಭಕ್ತರ ಹೆಸರಲ್ಲಿ ಅನ್ನದಾಸೋಹ ನಡೆಯಲಿದೆ ಎಂದು ಶ್ರೀ ಶಂಕರ ಸಾಲ್ಯಾನ್ ತಿಳಿಸಿದ್ದಾರೆ.


ConversionConversion EmoticonEmoticon