ಹಿಜಾಬ್ ಧರಿಸದ ಗಾಯಕಿಯ ಬಂಧನ!
ಕಾನ್ಸರ್ಟ್ ಒಂದರಲ್ಲಿ ಹಿಜಾಬ್ ಧರಿಸದೇ ಭಾಗವಹಿಸಿದ್ದಕ್ಕೆ ಇರಾನಿನ ಖ್ಯಾತ ಗಾಯಕಿಯನ್ನು ಬಂಧಿಸಲಾಗಿದೆ. 27 ವರ್ಷದ ಪರಸ್ಟೋ ಅಹ್ಮದಿ ಬಂಧಿತ ಗಾಯಕಿ. ಆಕೆ ಕಾರ್ಯಕ್ರಮವನ್ನು ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಿದ ನಂತರ ಬಂಧನವಾಗಿದೆ. ಆಕೆ ತೋಳಿಲ್ಲದ ಅಂಗಿ ಧರಿಸಿದ್ದಳು, ನಾಲ್ಕು ಪುರುಷರು ಕೂಡ ಅವಳೊಂದಿಗಿದ್ದರು ಎನ್ನುವ ಕಾರಣಕ್ಕೆ ಆಕೆ ಬಂಧನವಾಗಿದೆ ಎನ್ನಲಾಗಿದೆ. ಇರಾನ್‌ನಲ್ಲಿ ಇಸ್ಲಾಮಿಕ್ ಕಾನೂನಿನ ಪ್ರಕಾರ, ಪುರುಷರ ಮುಂದೆ ಮಹಿಳೆಯ ಹಾಡುಗಾರಿಕೆ, ನೃತ್ಯ ಮಾಡುವುದನ್ನು ನಿಷೇಧಿಸಲಾಗಿದೆ.

ConversionConversion EmoticonEmoticon