ಮಠಕ್ಕೆ ರೋಬೋಟಿಕ್ ಆನೆ ಕೊಟ್ಟ ನಟಿ ಶಿಲ್ಪಾ ಶೆಟ್ಟಿ
ನಟಿ ಶಿಲ್ಪಾ ಶೆಟ್ಟಿ ಕುಂದ್ರಾ ರಂಭಾಪುರಿ ಮಠಕ್ಕೆ ರೋಬೋಟಿಕ್ ಆನೆಯನ್ನ ಕೊಡುಗೆಯಾಗಿ ನೀಡಿದ್ದಾರೆ. ಜೀವಂತ ಆನೆಯನ್ನೂ ನಾಚಿಸುವಂತೆ ಇರುವ ಈ ರೋಬೋಟಿಕ್ ಆನೆಯನ್ನು ರಂಭಾಪುರಿ ಶ್ರೀ ವೀರ ಸೋಮೇಶ್ವರ ಜಗದ್ಗುರುಗಳು ಉದ್ಘಾಟಿಸಿ ಮಠಕ್ಕೆ ಸ್ವಾಗತಿಸಿಕೊಂಡಿದ್ದಾರೆ. ಈ ಆನೆ ಸದಾ ಮಠದ ಆವರಣದಲ್ಲೇ ಇದ್ದು, ಭಕ್ತರನ್ನು ಆಶೀರ್ವದಿಸಲಿದೆ. ಮಠದ ಆವರಣದಲ್ಲಿ ಇದಕ್ಕಾಗಿ ಕಟ್ಟಡವನ್ನೂ ನಿರ್ಮಿಸಲಾಗಿದೆ. ನೂರಾರು ಭಕ್ತರು ಆನೆಯ ಆಶೀರ್ವಾದ ಪಡೆದು, ಫೋಟೊ ಕ್ಲಿಕ್ಕಿಸಿಕೊಂಡು ಖುಷಿಪಟ್ಟಿದ್ದಾರೆ

ConversionConversion EmoticonEmoticon