ಮೈಸೂರಿಗೆ ತೆರಳುವ ಪ್ರವಾಸಿಗರಿಗೆ ನಿರಾಸೆ

ಮೈಸೂರಿಗೆ ತೆರಳುವ ಪ್ರವಾಸಿಗರಿಗೆ ನಿರಾಸೆ 

ಮೈಸೂರು, ಡಿಸೆಂಬರ್​ 06: ಅರಮನೆ (Mysore palace) ಮತ್ತು ಅಂಬಾರಿಯನ್ನು  ವೀಕ್ಷಿಸಲು ನಿತ್ಯ ಸಾವಿರಾರು ಜನರು ಮೈಸೂರಿಗೆ (Mysore) ತೆರಳುತ್ತಾರೆ. ತುಂಬಾ ಜನ ಅಂಬಾರಿಯನ್ನು ವೀಕ್ಷಿಸಲೆಂದೇ ಮೈಸೂರಿಗೆ ಬರುವುದುಂಟು ಅಂತ ವೀಕ್ಷಕರಿಗೆ ನಿರಾಸೆಯ ವಿಷಯ ಇದಾಗಿದೆ ಅರಮನೆಯೊಳಗೆ ಅಂಬಾರಿಯನ್ನು ಕಂಡು ಅನೇಕರು ಸೆಲ್ಫಿ ತೆಗೆದುಕೊಳ್ಳುತ್ತಾರೆ. ಆದರೆ, ಕೆಲ ದಿನಗಳ ಕಾಲ 750 ಕೆಜಿ ತೂಕದ ಅಂಬಾರಿ ವೀಕ್ಷಣೆಗೆ ಅವಕಾಶವಿರುವುದಿಲ್ಲ ಮೈಸೂರು ಅರಮನೆಯಲ್ಲಿ ಮೊದಲು ಗಮನ ಸೆಳೆಯುವುದು ಚಿನ್ನದ ಅಂಬಾರಿ. ಆದರೆ, ಅಂಬಾರಿ ವೀಕ್ಷಣೆಗೆ ನಿರ್ಬಂಧ ಹೇರಿದ್ದು ಪ್ರವಾಸಿಗರಲ್ಲಿ ನಿರಾಸೆ ಉಂಟು ಮಾಡಿದೆ. ಅಂಬಾರಿ ಕೆಳಗೆ ಹಾಗೂ ಹಿಂಭಾಗ ಮರದ ಕೆಲಸ‌, ಸೇರಿದಂತೆ ವಿವಿಧ ರಿಪೇರಿ ಕೆಲಸ ಇರವುದರಿಂದ ವೀಕ್ಷಣೆಗೆ ಬ್ರೇಕ್ ಹಾಕಲಾಗಿದೆ. ಈ ಹಿನ್ನೆಲೆಯಲ್ಲಿ ಚಿನ್ನದ ಅಂಬಾರಿ ವೀಕ್ಷಣೆಗೆ ಅವಕಾಶವಿಲ್ಲ.  

Kalyanpur Cement Kalyanpur Cement    







Previous
Next Post »