ನಾಯಿ ಮರಿ ತರಲು 200 ರೂ. ಕೊಡಲಿಲ್ಲವೆಂದು ಅಮ್ಮನ ಕೊಂದ ಮಗ!
ಛತ್ತೀಸ್ಗಢ, ಏಪ್ರಿಲ್ 18: ಮನೆಗೆ ಸಾಕು ನಾಯಿಯನ್ನು ಖರೀದಿಸಲು 200 ರೂ. ಕೊಡಬೇಕೆಂದು 45 ವರ್ಷದ ಪ್ರದೀಪ್ ಎಂಬಾತ ತನ್ನ ತಾಯಿಗೆ ಕೇಳಿದ್ದ. ಆದರೆ, ಆಕೆ ಕೊಡುವುದಿಲ್ಲ ಎಂದಿದ್ದರು. ಇದೇ ವಿಷಯಕ್ಕೆ ಜಗಳ ನಡೆದಿದ್ದು, ಆತ ತನ್ನ ತಾಯಿಯನ್ನು ಹೊಡೆದು ಕೊಂದಿದ್ದಾನೆ. ಬಳಿಕ ತನ್ನ ಪತ್ನಿಯನ್ನು ತೀವ್ರವಾಗಿ ಗಾಯಗೊಳಿಸಿದ್ದಾನೆ. ಛತ್ತೀಸ್‌ಗಢದ ರಾಯ್‌ಪುರದಲ್ಲಿ ಈ ಘಟನೆ ನಡೆದಿದ್ದು, ಆರೋಪಿಯನ್ನು 45 ವರ್ಷದ ಪ್ರದೀಪ್ ದೇವಾಂಗನ್ ಎಂದು ಗುರುತಿಸಲಾಗಿದೆ. ಆರೋಪಿ ತನ್ನ 70 ವರ್ಷದ ತಾಯಿಗೆ ಸಾಕು ನಾಯಿಯನ್ನು ಖರೀದಿಸಲು 200 ರೂ. ನೀಡುವಂತೆ ಕೇಳಿದಾಗ ಆಕೆ ನಿರಾಕರಿಸಿದ್ದರು.
ಇದರ ನಂತರ, ಒಬ್ಬರ ನಡುವೆ ವಾಗ್ವಾದ ನಡೆದು, ಕೋಪದ ಭರದಲ್ಲಿ ಪ್ರದೀಪ್ ತನ್ನ ತಾಯಿಗೆ ಸುತ್ತಿಗೆಯಿಂದ ಹೊಡೆದಿದ್ದಾನೆ. ತನ್ನ 35 ವರ್ಷದ ಪತ್ನಿ ರಾಮೇಶ್ವರಿ ಮಧ್ಯಪ್ರವೇಶಿಸಲು ಪ್ರಯತ್ನಿಸಿದಾಗ ಅವರ ಮೇಲೂ ಹಲ್ಲೆ ಮಾಡಿದನು ಎಂದು ಪೊಲೀಸರು ತಿಳಿಸಿದ್ದಾರೆ.

ConversionConversion EmoticonEmoticon