ಮುತ್ತಪ್ಪ ರೈ ಪುತ್ರನ ಹತ್ಯೆ ಸಂಚು ವಿಫಲ..ರಿಕ್ಕಿ ರೈ ಸ್ಥಿತಿ ಗಂಭೀರ ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಹತ್ಯೆ ಸಂಚು ವಿಫಲವಾಗಿದೆ. ಬಿಡದಿಯ ತಮ್ಮ ಮನೆಯಿಂದ ಬೆಂಗಳೂರಿಗೆ ತೆರಳುತ್ತಿದ್ದ ವೇಳೆ ಪಕ್ಕದ ಕಾಂಪೌಂಡ್ ಬಳಿ ಅವಿತಿದ್ದ ದುಷ್ಕರ್ಮಿಗಳು ಫೈರಿಂಗ್ ಮಾಡಿದ್ದಾರೆ. ಡ್ರೈವರ್

ಡೋರ್ ಸೀಳಿ ಒಳನುಗ್ಗಿರುವ ಗುಂಡು ಮೊದಲು ಸೀಟಿಗೆ ತಾಗಿ ನಂತರ ಎಡಭಾಗದ ಡೋರ್‌ಗೆ ಹೊಡೆದಿದೆ. ಈ ವೇಳೆ ಹಿಂಬದಿ ಸೀಟ್‌ನಲ್ಲಿದ್ದ ರಿಕ್ಕಿ ಮೂಗು, ಕೈಗೆ ಗಾಯವಾಗಿದೆ. ಅವರನ್ನು ಇದೀಗ ಬೆಂಗಳೂರಿನ ಮಣಿಪಾಲ್‌ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಸ್ಥಿತಿ ಗಂಭೀರವಾಗಿದೆಯಂತೆ..