ರಾಜ್ಯದಲ್ಲಿ ಮತ್ತೊಂದು ಅಮಾನುಷ ಕೃತ್ಯ.. ಕೆಲವು ದಿನಗಳ ಹಿಂದೆ ಉತ್ತರ ಕನ್ನಡದ ಹೊನ್ನಾವರದಲ್ಲಿ ಹಸುವಿನ ತಲೆ ಕಡೆದು ಗೋಮಾಂಸ ಮಾರಾಟ ಮಾಡಿದ ಪ್ರಕರಣ ನಡೆದಿತ್ತು. ಇದೀಗ, ಮತ್ತೊಂದು ಹೇಯ ಕೃತ್ಯ ನಡೆದಿದ್ದು, ಪಾಪಿಗಳು ಗಬ್ಬದ ಹಸುವನ್ನು ಹತ್ಯೆಗೈದು ಅದರ ಹೊಟ್ಟೆಯಲ್ಲಿದ್ದ ಕರುವನ್ನು ನದಿಗೆ ಬಿಸಾಡಿರುವ ದಾರುಣ

ಘಟನೆ ಭಟ್ಕಳದಲ್ಲಿ ನಡೆದಿದೆ. ಇಲ್ಲಿನ ಹೆಬಳೆಯ ಕುಕ್ ನೀರ್‌ಬಳಿಯಲ್ಲಿ ಗಬ್ಬದ ಹಸು ಕಡಿದ ದುರುಳರು ಹೊಟ್ಟೆಯೊಳಗಿದ್ದ ಕರು ಮತ್ತು ಗೋವಿನ ಬಾಲವನ್ನು ವೆಂಕಟಾಪುರ ನದಿಯಂಚಿನಲ್ಲಿ ಎಸೆದು ಗೋಮಾಂಸದೊಂದಿಗೆ ಪರಾರಿಯಾಗಿದ್ದಾರೆ.