ಸಚಿವೆ ಲಕ್ಷ್ಮೀ ಹೆಬ್ಬಾಳ‌ ಕಾರಿಗೆ ಗುದ್ದಿದ್ದ ಮಹಾರಾಷ್ಟ್ರದ ಲಾರಿ ಚಾಲಕ ಅರೆಸ್ಟ್



ಸಚಿವೆ ಲಕ್ಷ್ಮೀ ಹೆಬ್ಬಾಳ‌ ಕಾರಿಗೆ ಗುದ್ದಿದ್ದ ಮಹಾರಾಷ್ಟ್ರದ ಲಾರಿ ಚಾಲಕ ಅರೆಸ್ಟ್
ಸಚಿವೆ ಲಕ್ಷ್ಮೀ ಹೆಬ್ಬಾಳ‌ ಕಾರು ಅಪಘಾತಕ್ಕೆ ಕಾರಣವಾಗಿದ್ದ
ಲಾರಿ ಚಾಲಕನನ್ನು ಕಿತ್ತೂರು ಪೊಲೀಸರು ಬಂಧಿಸಿದ್ದಾರೆ.
ಜನವರಿ 14 ರಂದು ಕಿತ್ತೂರು ಬಳಿ ಅಂಬಡಗಟ್ಟಿ ಕ್ರಾಸ್‌ನಲ್ಲಿ
ಲಕ್ಷ್ಮೀ ಹೆಬ್ಬಾಳ‌ ಕಾರಿಗೆ ಗುದ್ದಿ ಲಾರಿ ಸಮೇತ ಡ್ರೈವರ್
ಪರಾರಿಯಾಗಿದ್ದ. ಇದೀಗ ಕಾರ್ಯಾಚರಣೆ ನಡೆಸಿ ಪುಣೆಯ
ಇಂದಾಪುರ ತಕ್ರಾರವಾಡಿ ಗ್ರಾಮದ ಚಾಲಕ ಮಧುಕರ
ಕೊಂಡಿರಾಮ ಸೋಮವಂಶಿಯನ್ನು ಪೊಲೀಸರು ಬಂಧಿಸಿ,
ತನಿಖೆ ಮುಂದುವರಿಸಿದ್ದಾರೆ. ಅಪಘಾತ ಎಸಗಿದ
ಲಾರಿಯನ್ನೂ ಸಹ ಪೊಲೀಸರು ಜಪ್ತಿ ಮಾಡಿದ್ದಾರೆ.
Previous
Next Post »