ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆ ಬ್ರಹ್ಮಾವರ "ಐಕ್ಯಂ" 2k25 ಕಾಲೇಜಿನ ವಾರ್ಷಿಕೋತ್ಸವ
ಬ್ರಹ್ಮಾವರ ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆಯ ವಾರ್ಷಿಕೋತ್ಸವ " ಐಕ್ಯಂ" 2025 ಅದ್ದೂರಿಯಿಂದ ನಡೆಯಿತು. ವಿಭಿನ್ನ ರೀತಿಯ ನೃತ್ಯ, ಸಂಗೀತದಿಂದ ಹಾಗೂ ಕಾಲೇಜಿನ ವಿದ್ಯಾರ್ಥಿಗಳೇ ಸ್ವತಃ ತಾವೇ ವಿನ್ಯಾಸಗೊಳಿಸಿರುವ ಸೀರೆಯ ಮೇಲೆ ಚಿತ್ರಗಳ ಚಿತ್ತಾರ ,ಎಂಬ್ರಾಡರಿ ಪ್ರದರ್ಶನ ಮತ್ತು ರ್‍ಯಾಂಪ್ ವಾಕ್ ನಡೆಯಿತು. ಶೈಕ್ಷಣಿಕವಾಗಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಮತ್ತು ಅನೇಕ ಸ್ಪರ್ಧೆಗಳನ್ನು ನಡೆಸಿ ವಿಜೇತರಿಗೆ ಬಹುಮಾನ ವಿತರಣೆ ನಡೆಸಲಾಯಿತು. ಅತಿಥಿಗಳಾಗಿ ಆಗಮಿಸಿದ ಡಾ. ದಯಾನಂದ ನಾಯಕ್ ನಿವೃತ್ತ ರಾಜ್ಯಶಾಸ್ತ್ರ ಉಪನ್ಯಾಸಕರು ಮಂಗಳೂರು ವಿಶ್ವವಿದ್ಯಾಲಯ ಹಾಗೂ ಶ್ರೀ ಕರುಣಾಕರ ಶೆಟ್ಟಿ ಉತ್ತಮ ವಾಗ್ಮಿ ಮತ್ತು ಅಧ್ಯಾಪಕರು ಇವರು ಕಾರ್ಯಕ್ರಮ ಉದ್ಘಾಟಿಸಿ ,ವಿದ್ಯಾರ್ಥಿಗಳಿಗೆ ವಿದ್ಯೆಯ ಜೊತೆಗೆ ಭವಿಷ್ಯವನ್ನು ಉತ್ತಮವಾಗಿ ನಿರ್ಮಿಸಿಕೊಳ್ಳುವುದು ನಮ್ಮ ಕೈಯಲ್ಲಿರುತ್ತದೆ.ಮತ್ತು ವಿದ್ಯೆಯ ಜೊತೆಗೆ ನಮ್ಮ ನಡತೆ ಎಂಬುದು ಅತಿ ಮುಖ್ಯವಾದಂತಹ ವಿಚಾರ ಎಂದು ತಿಳಿಸಿದರು. ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆ ಬ್ರಹ್ಮಾವರ ಇಲ್ಲಿನ .
ಸಂಸ್ಥಾಪಕರಾದ ಶ್ರೀ ಸುಬ್ರಹ್ಮಣ್ಯರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ವಿದ್ಯಾರ್ಥಿಗಳಿಗೆ ಜೀವನದಲ್ಲಿ ಯಶಸ್ಸು ಪಡೆಯಲು ಉತ್ತಮವಾದಂತಹ ಸಾಧಿಸುವ ಛಲಬೇಕು ಎಂದು ನುಡಿದು ಶುಭ ಹಾರೈಸಿದರು . ನಿರ್ದೇಶಕಿಯಾದ ಶ್ರೀಮತಿ ಮಮತಾ ಮತ್ತು ಪ್ರಾಂಶುಪಾಲರಾದ ಶ್ರೀಮತಿ ಡಾ ಸೀಮಾ.ಜಿ ಭಟ್ ಮತ್ತು ಸಾಂಸ್ಕೃತಿಕ ಸಮಿತಿಯ ವ್ಯವಸ್ಥಾಪಕಿ ಶ್ರೀಮತಿ ರಾಝಿಕಾ ಉಪಸ್ಥಿತರಿದ್ದರು.ಸಂಸ್ಥೆಯ ಎಲ್ಲಾ ಉಪನ್ಯಾಸಕರ ಮತ್ತು ಉಪನ್ಯಾಸಕೇತರ ವೃಂದದವರು,ವಿದ್ಯಾರ್ಥಿ ವೃಂದದವರು ಉಪಸ್ಥಿತರಿದ್ದರು. ಅತಿಥಿಗಳನ್ನು ಉಪನ್ಯಾಸಕಿ ಅನ್ನಪೂರ್ಣ ಮತ್ತು ಪ್ರಿಯ ನಾಯಕ್ ಪರಿಚಯಿಸಿದರು. ಉಪನ್ಯಾಸಕಿ ಕುಮಾರಿ ಸಾಕ್ಷಿತಾ ಸ್ವಾಗತಿಸಿ, ಕನ್ನಡ ಉಪನ್ಯಾಸಕಿ ಅನುಪಮ ಪಿ ಭಟ್ ವಂದಿಸಿ, ವಾಣಿಜ್ಯ ವಿಭಾಗದ ಉಪನ್ಯಾಸಕಿ ಕುಮಾರಿ ಸ್ವಾತಿ ಕಾರ್ಯಕ್ರಮವನ್ನು ನಿರೂಪಿಸಿದರು
About Admin MC3
This is dummy text. It is not meant to be read. Accordingly, it is difficult to figure out when to end it. But then, this is dummy text. It is not meant to be read. Period.

ConversionConversion EmoticonEmoticon