ಭಾರೀ ಮಳೆ.. ಈ ಜಿಲ್ಲೆಗಳ ಅಂಗನವಾಡಿಗಳಿಗೆ ರಜೆ ಕರಾವಳಿ, ಮಲೆನಾಡು ಮತ್ತು ಕೊಡಗಿನಲ್ಲಿ ಇದೀಗ ನಿರಂತರವಾಗಿ ಮಳೆ ಸುರಿಯದಿದ್ದರೂ ಬಿಟ್ಟೂ ಬಿಟ್ಟು ಒಮ್ಮೆಲೆ ಭಾರೀ ಮಳೆ ಸುರಿಯುತ್ತಿದೆ. ಹೀಗಾಗಿ ಈ ಭಾಗದಲ್ಲಿ ಜನಜೀವನಕ್ಕೆ ತೊಂದರೆಯಾಗಿದೆ. ಹವಾಮಾನ ಇಲಾಖೆ ಮೇ 28ರವರೆಗೆ ರೆಡ್

ಅಲರ್ಟ್ ಘೋಷಣೆ ಮಾಡಿದೆ. ಹೀಗಾಗಿ ದಕ್ಷಿಣ ಕನ್ನಡ, ಉಡುಪಿ, ಕೊಡಗು ಮತ್ತು ಚಿಕ್ಕಮಗಳೂರು ಜಿಲ್ಲೆಯ ಅಂಗನವಾಡಿಗಳಿಗೆ ಇಂದು ಸಹ ರಜೆ ಘೋಷಿಸಲಾಗಿದೆ. ಹೀಗಾಗಿ ಮಕ್ಕಳನ್ನು ಮನೆಯ ಆಚೆ ಕಳುಹಿಸಬೇಡಿ.