ಪಾಕಿಸ್ತಾನದ ಗುಂಡಿನ ದಾಳಿಗೆ ಭಾರತೀಯ ಯೋಧ ಹುತಾತ್ಮ ಭಾರತದ ಮಿಂಚಿನ ದಾಳಿಗೆ ತತ್ತರಿಸಿರುವ ಪಾಕಿಸ್ತಾನ ಸೇನೆ ನಿನ್ನೆ ರಾತ್ರಿಯಿಂದ ಗಡಿಯಲ್ಲಿ ಗುಂಡಿನ ದಾಳಿ ನಡೆಸುತ್ತಿದೆ. ಇದುವರೆಗೆ 31 ಅಮಾಯಕರು ಪ್ರಾಣ ಕಳೆದುಕೊಂಡಿದ್ದು, ಇದೀಗ ಭಾರತದ ಯೋಧರೊಬ್ಬರು ವೀರ ಮರಣವನ್ನಪ್ಪಿದ್ದಾರೆ. ಪಾಕಿಸ್ತಾನದ ಗುಂಡಿನ ದಾಳಿಗೆ ಗುಂಡಿನಿಂದಲೇ ಪ್ರತ್ಯುತ್ತರ .

ಕೊಡುವಾಗ ಲ್ಯಾನ್ಸ್ ನಾಯಕ್ ದಿನೇಶ್ ಕುಮಾರ್ ಹುತಾತ್ಮರಾಗಿದ್ದಾರೆ ಎಂದು ಭಾರತೀಯ ಸೇನೆ ದೃಢಪಡಿಸಿದೆ. ದಿನೇಶ್ ಕುಮಾರ್ ತಮ್ಮ ಕೊನೆಯುಸಿರಿರುವವರೆಗೂ ಧೈರ್ಯದಿಂದ ಹೋರಾಡಿದರು ಎಂದು ಸೇನೆ ಕೊಂಡಾಡಿದೆ