ಭಾರತೀಯ ಸೇನೆಗೆ ಮತ್ತಷ್ಟು ಆನೆ ಬಲ.. ಭಾರತ ಮತ್ತು ಪಾಕ್ ನಡುವೆ ದಾಳಿ ಹಾಗೂ ಪ್ರತಿ ದಾಳಿ ನಡೆಯುತ್ತಿದೆ. ಇದೀಗ ಭಾರತೀಯ ಸೇನೆಗೆ ಮತ್ತೊಂದು ಬಲ ಸಿಕ್ಕಿದೆ. ಸಮಯ ಬಂದರೇ ಭಾರತೀ ಸೇನೆಗೆ ಬಲ ತುಂಬಲು ನಾವು ಸಿದ್ಧ ಎಂಬುದಾಗಿ ನಿವೃತ್ತ ಯೋಧರು

ಬೆಂಬಲ ಸೂಚಿಸಿದ್ದಾರೆ. ಹಾಸನದ ಉದಯಗಿರಿಯ ಸೈನಿಕರ ಭವನದಲ್ಲಿ ನಿವೃತ್ತ ಯೋಧರು ತುರ್ತು ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ ಸರ್ಕಾರದಿಂದ ಕರೆ ಬಂದರೇ ಸೇವೆ ಸಲ್ಲಿಸಲು ಸಿದ್ಧರಾಗುವಂತೆ ನಿರ್ಧಾರ ಕೈಗೊಳ್ಳುವ ಮೂಲಕ ಭಾರತೀಯ ಸೇನೆಗೆ ಬಲ ತುಂಬಲು ಮಾಜಿ ಸೈನಿಕರು ನಿರ್ಧರಿಸಿದ್ದಾರೆ.