ಕನ್ನಡ ಭಾಷೆ ಬಗ್ಗೆ ವಿವಾದಾತ್ಮಕವಾಗಿ ಹೇಳಿಕೆ ನೀಡಿದ್ದ ತಮಿಳು ನಟ ಕಮಲ್ ಹಾಸನ್ ವಿರುದ್ಧ ರೊಚ್ಚಿಗೆದ್ದಿರುವ ಕನ್ನಡಿಗರು, ದೊಡ್ಡ ಮಟ್ಟದ ಹೋರಾಟಕ್ಕೆ ಸಿದ್ದರಾಗಿದ್ದಾರೆ. ಕನ್ನಡಿಗರನ್ನು ಕೆಣಕಿದರೆ ಸುಮ್ಮನೆ ಇರುವುದಿಲ್ಲ ಎಂದು ಬಿಸಿ ಮುಟ್ಟಿಸಲು ಕನ್ನಡಪರ

ಸಂಘಟನೆಗಳು ಕರ್ನಾಟಕ ಬಂದ್‌'ಗೆ ಮುಂದಾಗಿವೆ ಎನ್ನಲಾಗಿದೆ. ಕರ್ನಾಟಕ ಬಂದ್ ದಿನಾಂಕ ಫಿಕ್ಸ್ ಆಗಲಿದೆ ಎಂಬ ಸುದ್ದಿ ಇದೆ. ಒಂದು ವೇಳೆ ಕರ್ನಾಟಕ ಬಂದ್‌'ಗೆ ಕರೆ ಕೊಟ್ಟರೇ, ಜೂನ್ 3 ರಂದು ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸುವ ಸಾಧ್ಯತೆ ಇದೆ.