ಭೀಕರ ಅಪಘಾತ: 21 ಯುವ ಕ್ರೀಡಾಪಟುಗಳು ಸಾವು
ನೈಜೀರಿಯಾದಲ್ಲಿ ಭೀಕರ ಬಸ್ ಅಪಘಾತ ಸಂಭವಿಸಿದೆ. ಪರಿಣಾಮ 21 ಯುವ ಕ್ರೀಡಾಪಟುಗಳು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ನೈಜೀರಿಯಾದ ಓಗುನ್ ರಾಜ್ಯ ಆಯೋಜಿಸುತ್ತಿದ್ದ 22ನೇ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಭಾಗವಹಿಸಿ, ಬಳಿಕ ನೈಜೀರಿಯಾದ ಉತ್ತರದಲ್ಲಿರುವ ಕಾನೊಗೆ ಹಿಂತಿರುಗುತ್ತಿದ್ದ ವೇಳೆ ಈ ದುರಂತ ಸಂಭವವಿದೆ. ಈ ದುರಂತದಲ್ಲಿ ಮೃತಪಟ್ಟವರ ಗುರುತುಗಳನ್ನು ಬಹಿರಂಗಪಡಿಸಲಾಗಿಲ್ಲ. "ಇದು ರಾಷ್ಟ್ರೀಯ ದುರಂತ" ಎಂದು ನೈಜೀರಿಯಾದ ಕ್ರೀಡಾ ಸಚಿವಾಲಯದ ವಕ್ತಾರರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ConversionConversion EmoticonEmoticon