ತೈಲ ಮಾರುಕಟ್ಟೆ ಕಂಪನಿಗಳು 19 KG LPG ಗ್ಯಾಸ್ ಸಿಲಿಂಡರ್‌ನ ಬೆಲೆಯಲ್ಲಿ ಇಳಿಕೆ ಮಾಡಿದ್ದು, ಗೃಹ ಬಳಕೆಯ LPG ಸಿಲಿಂಡ‌ರ್ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಇಂದಿನಿಂದ 19 KG ವಾಣಿಜ್ಯ ಬಳಕೆ LPG ಸಿಲಿಂಡರ್‌ನ ಬೆಲೆ 24 ರೂ.ಗಳಷ್ಟು

ಇಳಿಕೆಯಾಗಿದೆ. ಇಂಡಿಯನ್ ಆಯಿಲ್ ಹೊರಡಿಸಿದ ಹೊಸ ದರದ ಪ್ರಕಾರ, 19 ಕೆಜಿ ಎಲ್‌ಪಿಜಿ ಸಿಲಿಂಡ‌ರ್ ಈಗ ದೆಹಲಿಯಲ್ಲಿ 1,723.50 ರೂ.ಗೆ ಲಭ್ಯವಿರುತ್ತದೆ. ಏಪ್ರಿಲ್ 8 ರಿಂದ 14 ಕೆಜಿ ಎಲ್‌ಪಿಜಿ ಸಿಲಿಂಡರ್‌ನ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ.