2025-26ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲಾ ಮತ್ತು ಪದವಿ ಪೂರ್ವ ಕಾಲೇಜುಗಳು ಪ್ರಾರಂಭವಾಗಿದ್ದು, ರಿಯಾಯಿತಿ ದರದಲ್ಲಿ ಬಸ್ ಪಾಸ್ ಗಳನ್ನು ಇಂದಿನಿಂದಲೇ( ಜೂ. 2) ಕೆಎಸ್‌ಆರ್‌ಟಿಸಿ ವಿತರಿಸಲಿದೆ. ಪಾಸ್‌ಗಳನ್ನು ಪಡೆದುಕೊಳ್ಳಲು ವಿದ್ಯಾರ್ಥಿಗಳು ಸೇವಾಸಿಂಧು https://sevasindhuservices .karnataka.gov.in/buspassservices ಆನ್‌ಲೈನ್

ಮೂಲಕ ಅರ್ಜಿಯನ್ನು ಸಲ್ಲಿಸಬಹುದು. ವಿದ್ಯಾರ್ಥಿ ಪಾಸ್‌ಗಳ ಅರ್ಜಿ ಸಲ್ಲಿಕೆ ಸಂಬಂಧ ದೂರುಗಳಿದ್ದಲ್ಲಿ, 080-24410574 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು.