ಗ್ರಾಮೀಣ ಪ್ರದೇಶಗಳು ಸಮೃದ್ಧವಾದ ಸಂಸ್ಕೃತಿ , ಸಂಪ್ರದಾಯಗಳನ್ನು ಹೊಂದಿದೆ. ಇವುಗಳೊಂದಿಗೆ ನಿಕಟ ಸಂಪರ್ಕವನ್ನು ಸರಕಾರಿ ಕನ್ನಡ ಮಾಧ್ಯಮ ಶಾಲೆಗಳು ಹೊಂದಿರುತ್ತವೆ . ಸರಕಾರಿ
ಕನ್ನಡ ಮಾಧ್ಯಮ ಶಾಲೆಗಳು ಮಕ್ಕಳಲ್ಲಿ ಸಹೋದರ ಭಾವನೆ. ತಮ್ಮ ದೇಶದ ಬಗ್ಗೆ ಅಪಾರವಾದ ಕಾಳಜಿ, ಸಹಕಾರ ಮತ್ತು ಸೌಹಾರ್ದಯುತ ಬಾಂಧವ್ಯಗಳನ್ನು ಬೆಳೆಸಲು ಪೂರಕ ವಾತಾವರಣವನ್ನು ನಿರ್ಮಿಸುತ್ತಾ,ಮಕ್ಕಳನ್ನು ದೇಶದ ಸತ್ಪ್ರಜೆಗಳಾಗಿ ಮೂಡಿಸುತ್ತಿವೆ ಎಂದು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ , ಕೊಳನ ಕಲ್ಲು ಇಲ್ಲಿಗೆ 17 ವರ್ಷಗಳಿಂದ ಕಲಿಕಾ ಪ್ರೋತ್ಸಾಹಕವಾಗಿ ಲೇಖನ ಸಾಮಗ್ರಿ ಹಾಗೂ ನೋಟ್ ಪುಸ್ತಕಗಳನ್ನು ಕೊಡುಗೆಯಾಗಿ ನೀಡುತ್ತಿರುವ ಶ್ರೀ ಚಂದ್ರಶೇಖರ್ ಶೆಟ್ಟಿ ಹೋಟೆಲ್ ಉದ್ಯಮಿ ಹೈದ್ರಾಬಾದ್ ಇವರು 25 - 26 ನೇ ಸಾಲಿಗೆ ಈ ಶಾಲೆಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಒಂದು ವರ್ಷಕ್ಕಾಗುವಷ್ಟು ನೋಟು ಪುಸ್ತಕ ಹಾಗೂ ಲೇಖನ ಸಾಮಗ್ರಿಗಳನ್ನು ವಿತರಿಸಿ ನುಡಿದರು. ದಾನಿಗಳಾದ ಚಂದ್ರಶೇಖರ್ ಶೆಟ್ಟಿ ಉದ್ಯಮಿಗಳು ಹೈದರಾಬಾದ್ ಇವರನ್ನು 17 ವರ್ಷಗಳಿಂದ ಶಾಲೆಗೆ ಉಚಿತ ನೋಟ್ ಪುಸ್ತಕ ಹಾಗೂ ಲೇಖನ ಸಾಮಗ್ರಿ ನೀಡುತ್ತಿರುವುದಕ್ಕೆ ಊರ ಜನರ ಸಹಕಾರದೊಂದಿಗೆ ಸನ್ಮಾನಿಸಲಾಯಿತು. ಸಭಾ ಕಾರ್ಯಕ್ರಮದ
ಅಧ್ಯಕ್ಷತೆಯನ್ನು ತಾಲೂಕು ಪಂಚಾಯತ್ ನ ಮಾಜಿ ಸದಸ್ಯರಾದ ಪ್ರದೀಪ್ ಚಂದ್ರ ಶೆಟ್ಟಿ ಅವರು ವಹಿಸಿ, ಶಾಲೆಯ ಅಭಿವೃದ್ಧಿಯಲ್ಲಿ ಊರಿನ ಗಣ್ಯರು ಹಿಂದೆ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳು ಮುಕ್ತ ಮನಸ್ಸಿನಿಂದ ಶಾಲಾ ಅಭಿವೃದ್ಧಿಯಲ್ಲಿ ಭಾಗವಹಿಸುತ್ತಿರುವುದರಿಂದ ಈ ಗ್ರಾಮೀಣ ಪ್ರದೇಶದ ನಮ್ಮ ಶಾಲೆ ಹೊಸ ಬೆಳಕನ್ನು ಕಾಣುತ್ತಿದೆ. ಕನ್ನಡ ಮಾಧ್ಯಮ ಶಾಲೆಗಳು ಉಳಿಯಲು ಎಲ್ಲರೂ ಸಹಕರಿಸಿದರೆ ಕನ್ನಡ ಮಾಧ್ಯಮ ಶಾಲೆಗಳು ಉಳಿಯುತ್ತವೆ ಮತ್ತು ಬೆಳೆಯುತ್ತವೆ ಎಂದು ಹೇಳಿದರು. ವೇದಿಕೆಯಲ್ಲಿ ಶಾಲಾ ಹಿತೈಷಿಗಳಾದ ಶಿವಾರಾಮ್ ಶೆಟ್ಟಿ, ರತ್ನಾಕರ್ ಶೆಟ್ಟಿ ಹಾಗೂ ನಿವೃತ್ತ ಮುಖ್ಯ ಶಿಕ್ಷಕರಾದ ಗಂಗಮ್ಮ ಶೆಟ್ಟಿಯವರು ಉಪಸ್ಥಿತರಿದ್ದರು. ನಿವೃತ್ತ ಮುಖ್ಯೋಪಾಧ್ಯಾಯರಾದ ಸೂರಪ್ಪ ಹೆಗಡೆಯವರು ಸ್ವಾಗತಿಸಿದರು. ಗ್ರಾಮ ಪಂಚಾಯತ್ ಸದಸ್ಯರಾದ ಗಣೇಶ ಶೆಟ್ಟಿ ಅವರು ಧನ್ಯವಾದ ಸಮರ್ಪಣೆ ಮಾಡಿದರು. ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಸ್ವಪ್ನ ಸತೀಶ್ ರವರು ಕಾರ್ಯಕ್ರಮ ಸಂಯೋಜಿಸಿ ನಿರೂಪಿಸಿದರು. ಎಸ್. ಡಿ. ಎಂ. ಸಿಯ ಸದಸ್ಯರು, ಪೋಷಕರು ಹಾಗೂ ವಿದ್ಯಾ ಅಭಿಮಾನಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.


ConversionConversion EmoticonEmoticon