ಜೂನ್ 15 ರಂದು ನಡೆಯಬೇಕಿದ್ದ NEET PG 2025
ಪರೀಕ್ಷೆಯನ್ನು ಮುಂದೂಡಲಾಗಿದೆ. ಸಂಪೂರ್ಣ
ಪಾರದರ್ಶಕತೆಗಾಗಿ ಒಂದೇ ಶಿಫ್ಟ್ನಲ್ಲಿ ಪರೀಕ್ಷೆ ನಡೆಸುವಂತೆ
ಸುಪ್ರೀಂ ಕೋರ್ಟ್ ಆದೇಶ ನೀಡಿತ್ತು. ಆದೇಶದ ಅನ್ವಯ,
ಪರೀಕ್ಷೆಯನ್ನು ಮುಂದೂಡಲು ನ್ಯಾಷನಲ್ ಬೋರ್ಡ್
ಆಫ್ ಎಕ್ಸಾಮಿನೇಷನ್ಸ್ ನಿರ್ಧಾರ ಕೈಗೊಂಡಿದೆ. ಸುಪ್ರೀಂ
ಆದೇಶ ಅನುಸರಿಸಿ ಹೆಚ್ಚಿನ ಕೇಂದ್ರಗಳಲ್ಲಿ ಪರೀಕ್ಷೆ
ನಡೆಸಲು ವ್ಯವಸ್ಥೆ ಮಾಡುವುದಾಗಿ ತಿಳಿಸಿದೆ. ಪರಿಷ್ಕೃತ
ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು
ಹೇಳಿದೆ.

ConversionConversion EmoticonEmoticon