ನಕ್ಸಲ್ ನೇತ್ರಾವತಿ ದಳದ ಮುಖಂಡ ವಿಕ್ರಂಗೌಡ ಎಎನ್​ಎಫ್ ಮತ್ತು ಪೊಲೀಸ್ ಎನ್​ಕೌಂಟರ್​ನಲ್ಲಿ ಬಲಿ-webnewskannada

ನಕ್ಸಲ್ ನೇತ್ರಾವತಿ ದಳದ ಮುಖಂಡ ವಿಕ್ರಂಗೌಡ ಎಎನ್​ಎಫ್ ಮತ್ತು ಪೊಲೀಸ್ ಎನ್​ಕೌಂಟರ್​ನಲ್ಲಿ ಬಲಿ-webnewskannada


ಉಡುಪಿ: ರಾಜ್ಯದಲ್ಲಿ ಕಳೆದ ಕೆಲ ವರ್ಷಗಳಿಂದ ನಕ್ಸಲರ ಹಾವಳಿ ಕಡಿಮೆಯಾಗಿತ್ತು ಅಥವಾ ಇಲ್ಲವಾಗಿತ್ತು ಅನ್ನೋದು ಸುಳ್ಳಲ್ಲ, ಅದರೆ ಅವರು ಮತ್ತೇ ತಲೆ ಎತ್ತಿರುವುದು ಸಹ ಅಷ್ಟೇ ಸತ್ಯ. 
ಕಳೆದ‌ ಕೆಲವು ದಿನಗಳಿಂದ ಕಾರ್ಕಳ, ಹೆಬ್ರಿ ಭಾಗದಲ್ಲಿ ನಕ್ಸಲ್ ಚಟುವಟಿಕೆ ಕಂಡುಬಂದ ಹಿನ್ನೆಲೆಯಲ್ಲಿ ಎಎನ್ಎಫ್ ತಂಡ ಕೂಂಬಿಂಗ್ ತೀವ್ರಗೊಳಿಸಿತ್ತು.
ಹೆಬ್ರಿ ಪರಿಸರ ಕಬ್ಬಿನಾಲೆ, ಪೀತೆಬೈಲು ಪರಿಸರದಲ್ಲಿ ನಾಲ್ವರು ನಕ್ಸಲರು ಓಡಾಡುತ್ತಿದ್ದ ಮಾಹಿತಿ ಹಿನ್ನೆಲೆಯಲ್ಲಿ ಎಎನ್ಎಫ್ ಕಾರ್ಯಾಚರಣೆ ನಡೆಸಿದ್ದು, ಈ‌ನಡುವೆ ಎಎನ್ಎಫ್ ಮತ್ತು ನಕ್ಸಲರ‌ ನಡುವೆ ಸೋಮವಾರ ರಾತ್ರಿ ಮುಖಾಮುಖಿಯಾಗಿದ್ದು, ಗುಂಡಿನ ಚಕಮಕಿ ನಡೆದು
ನಕ್ಸಲ್ ನಾಯಕ ವಿಕ್ರಮ್ ಗೌಡನಿಗೆ ಗುಂಡು ತಗುಲಿ ಮೃತಪಟ್ಟಿದ್ದಾನೆ. ಇನ್ನೂ ಮೂವರು ಕಾಡಿನಲ್ಲಿ ತಲೆಮರೆಸಿಕೊಂಡಿದ್ದಾರೆ.
ಕಾರ್ಕಳ, ಹೆಬ್ರಿ ಸಹಿತ ವಿವಿಧ ಪಶ್ಚಿಮಘಟ್ಟದ ಕಾಡಿನಲ್ಲಿ ಕೂಂಬಿಂಗ್ ಕಾರ್ಯಾಚರಣೆ ತೀವ್ರಗೊಂಡಿದೆ.
ಘಟನೆ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು 

Previous
Next Post »