ಫೆಂಗಲ್ ಆಯ್ತು ಇನ್ನೀಗ ಮತ್ತೆರಡು ಸೈಕ್ಲೋನ್ ಕಾಟ..
ಫೆಂಗಲ್ ಆಯ್ತು ಇನ್ನೀಗ ಮತ್ತೆರಡು ಸೈಕ್ಲೋನ್ ಕಾಟ.. ಭಾರೀ ಮಳೆ! ಫೆಂಗಲ್ ಚಂಡಮಾರುತ ಅಬ್ಬರ ಕಮ್ಮಿಯಾಗುತ್ತಿದ್ದಂತೆಯೇ ಮತ್ತೆರಡು ಸೈಕ್ಲೋನ್ ಸೃಷ್ಟಿಯಾಗುವ ಲಕ್ಷಣ ಕಂಡುಬಂದಿದೆ. ಮುಂದಿನ 10 ದಿನಗಳಲ್ಲಿ ಬಂಗಾಳಕೊಲ್ಲಿಯಲ್ಲಿ ೨ ವಾಯುಭಾರ ಕುಸಿತ ಉಂಟಾಗುವ ಸಾಧ್ಯತೆ ಇದ್ದು, ಇದರ ಪ್ರಭಾವದಿಂದ ರಾಜ್ಯದಲ್ಲಿ ಭಾರೀ ಮಳೆಯಾಗಲಿದೆ. ದಕ್ಷಿಣ ಒಳನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಡಿ. 14 ಮತ್ತು 15 ರಂದು ಮಳೆಯಾಗಲಿದೆ. 2 ನೇ ವಾಯುಭಾರ ಕುಸಿತ ಡಿ. 16ಕ್ಕೆ ಉಂಟಾಗಲಿದ್ದು, ಡಿ. 17-18ಕ್ಕೆ ಜೋರು ಮಳೆಯಾಗಲಿದೆ ಎಂದು ಹವಾಮಾನ ತಜ್ಞರು ಮಾಹಿತಿ ನೀಡಿದ್ದಾರೆ.

ConversionConversion EmoticonEmoticon