ಕರಾವಳಿಯಲ್ಲಿ 'OP TRIGGER' ಆಪರೇಷನ್‌.. ಸಮುದ್ರದಲ್ಲಿ ಕಟ್ಟೆಚ್ಚರ ಪಹಲ್ಲಾಮ್‌ನಲ್ಲಿ ಉಗ್ರರ ದಾಳಿಯ ಬಳಿಕ ರಾಜ್ಯದ ಕರಾವಳಿಯಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ಕರಾವಳಿಯಲ್ಲಿ ಹದ್ದಿನ ಕಣ್ಣಿರಿಸಿರುವ ನೌಕಾ ಪಡೆ, ಇಂಡಿಯನ್ ಕೋಸ್ಟ್ ಗಾರ್ಡ್ ಹಾಗೂ ಕೋಸ್ಟಲ್‌ ಪೊಲೀಸರು ಕೂಂಬಿಂಗ್ .

ಕಾರ್ಯಾಚರಣೆ ತೀವ್ರಗೊಳಿಸಿದ್ದಾರೆ. 'OP TRIGGER' ಹೆಸರಿನಲ್ಲಿ ಆಪರೇಷನ್‌ ನಡೆಸಲಾಗುತ್ತಿದ್ದು, ಅರಬ್ಬಿ ಸಮುದ್ರ ಭಾಗದಲ್ಲಿ ತಪಾಸಣೆ ನಡೆಸಲಾಗುತ್ತಿದೆ. ಸಮುದ್ರದಲ್ಲಿರುವ ಸಾಗುವ ಪ್ರತಿ ಬೋಟುಗಳು, ಬಂದರುಗಳಲ್ಲಿರುವ ಬೋಟುಗಳು, ಕಾರ್ಮಿಕರ ಪರಿಶೀಲನೆ ನಡೆಸಲಾಗುತ್ತಿದೆ